ಡಿಸ್ಕ್ ಪ್ರೊಲಾಪ್ಸ್ ಬಗ್ಗೆ ನಿಮಗೆ ಏನು ತಿಳಿದಿರಬೇಕು !
ಸ್ಲಿಪ್ ಡಿಸ್ಕ್ ಎಂದರೇನು? ಇದಕ್ಕೆ ಇರುವ ಇತರ ಪದಗಳು – ಡಿಸ್ಕ್ ಹರ್ನಿಯೇಷನ್, ಡಿಸ್ಕ್ ಪ್ರೋಲ್ಯಾಪ್ಸ್, ಡಿಸ್ಕ್ ಎಕ್ಸ್ಟ್ರುಶನ್, ಡಿಸ್ಕ್ ಮೈಗ್ರೇಶನ್, ಡಿಸ್ಕ್ ಮುಂಚಾಚುವಿಕೆ ಎಂದೂ ಕರೆಯುತ್ತಾರೆ. ನಿಮ್ಮ ಬೆನ್ನುಹುರಿಯನ್ನು ರೂಪಿಸುವ ಕಶೇರುಖಂಡಗಳು (ಮೂಳೆಗಳು) ಒಂದರ ಮೇಲೊಂದು ಇಟ್ಟಿಗೆ ತರಹ ಇರುತ್ತವೆ ಮೇಲಿನಿಂದ ಕೆಳಕ್ಕೆ ಕತ್ತಿನಲ್ಲಿ ಏಳು ಮೂಳೆಗಳು, ಎದೆಗೂಡಿನ ಬೆನ್ನೆಲುಬು ಹನ್ನೆರಡು ಮತ್ತು ಸೊಂಟದ ಬೆನ್ನುಮೂಳೆಯಲ್ಲಿ ಐದು, ಕೆಳಭಾಗದಲ್ಲಿ ಸ್ಯಾಕ್ರಮ್ ಮತ್ತು ಕೋಕ್ಸಿಕ್ಸ್ ಇರುತ್ತದೆ. ಡಿಸ್ಕ್ಗಳು ಈ ಮೂಳೆಗಳಿಗೆ ಮೆತ್ತನೆ ನೀಡುತ್ತವೆ. ವಾಕಿಂಗ್ ಮತ್ತು ಎತ್ತುವಿಕೆಯಂತಹ…